Tuesday, 6 February 2018

ಶೌಚಾಲಯ ನಿರ್ಮಾಣ ಬಳಕೆ ಜಾಗೃತಿಗೆ ಆಶಾ ಕಾರ್ಯಕರ್ತೆಯರಿಂದ ಬೃಹತ್ ಜಾಥಾ ಮಾನವ ಸರಪಳಿ (06-02-2018)

   

ಶೌಚಾಲಯ ನಿರ್ಮಾಣ ಬಳಕೆ ಜಾಗೃತಿಗೆ ಆಶಾ ಕಾರ್ಯಕರ್ತೆಯರಿಂದ ಬೃಹತ್ ಜಾಥಾ ಮಾನವ ಸರಪಳಿ

ಚಾಮರಾಜನಗರ, ಫೆ. 06 - ಶೌಚಾಲಯ ನಿರ್ಮಾಣ ಹಾಗೂ ಬಳಕೆಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪಂಚಾಯತ್ ವತಿಯಿಂದ ಆಶಾ ಕಾರ್ಯಕರ್ತೆಯರು ನಗರದಲ್ಲಿ ಇಂದು ಬೃಹತ್ ಜಾಥಾ ನಡೆಸಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಗಮನ ಸೆಳೆದರು.
ನಗರದ ವಾಲ್ಮೀಕಿ ಭವನದಲ್ಲಿ ಆಶಾ ಕಾರ್ಯಕತೆರ್Àಯರ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.






ಇದೇವೇಳೆ ಮಾತನಾಡಿದ ರಾಮಚಂದ್ರ ಅವರು ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಚ್ಚತೆ ಎನ್ನುವುದು ನಮ್ಮ ಮನೆ ಸುತ್ತಮುತ್ತಲ ಪರಿಸರ ಕಾಪಾಡಿಕೊಳ್ಳುವುದರಿಂದಲೇ ಆರಂಭವಾಗಬೇಕು. ಗ್ರಾಮದ ನೈರ್ಮಲ್ಯ ಚೆನ್ನಾಗಿದ್ದರೆ ಆರೋಗ್ಯವೂ ಸಹ ಉತ್ತಮವಾಗಿರಲಿದೆ. ಹೀಗಾಗಿ ಪ್ರತಿಯೊಬ್ಬರೂ ಶೌಚಾಲಯಕ್ಕೆ ಬಯಲು ಅವಲಂಬಿಸದೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಈಗಾಗಲೇ ನಿರ್ಮಾಣ ಮಾಡಿಕೊಂಡಿರುವವರು ಬಳಕೆ ಮಾಡಬೇಕು ಎಂದರು.
ಬಳಿಕ ವಾಲ್ಮೀಕಿ ಭವನದಿಂದ ಹೊರಟ ಆಶಾ ಕಾರ್ಯಕರ್ತೆಯರ ಜಾಥಾ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಬಂದು ಸೇರಿತು. ಅಲ್ಲಿ ಬೃಹತ್ ಮಾನವ ಸರಪಳಿಯನ್ನು ರಚಿಸುವ ಮೂಲಕ ಆಶಾ ಕಾರ್ಯಕರ್ತೆಯರು ಶೌಚಾಲಯ ನಿರ್ಮಾಣ ಹಾಗೂ ಬಳಕೆ ಮಹತ್ವ ಕುರಿತು ಘೋಷಣೆಗಳನ್ನು ಮೊಳಗಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಇದೇವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಆರೋಗ್ಯದ ಪ್ರಥಮ ಹೆಜ್ಜೆ ನೈರ್ಮಲ್ಯವಾಗಿದೆ. ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಹ ಆಶಾ ಕಾರ್ಯಕರ್ತೆಯರು ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕೆಂದರು.
ತದನಂತರ ವಾಲ್ಮೀಕಿ ಭವನಕ್ಕೆ ಮತ್ತೆ ಮರಳಿದ ಆಶಾ ಕಾರ್ಯಕರ್ತೆಯರು ಭವನದ ಸಭಾಂಗಣದಲ್ಲಿ ಸಮಾವೇಶಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಆರೋಗ್ಯ ಹಾಗೂ ಸ್ವಚ್ಚತೆಗೆ ಅವಿನಾಭಾವ ಸಂಬಂಧವಿದೆ. ಗ್ರಾಮೀಣ ಭಾಗಗಳಲ್ಲಿ ಸಕ್ರಿಯರಾಗಿರುವ ಆಶಾ ಕಾರ್ಯಕರ್ತೆಯರು ಶೌಚಾಲಯ ಬಳಕೆ, ನಿರ್ಮಾಣದ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಲು ಸಾಧ್ಯವಾಗಲಿದೆ. ಈ ಕೆಲಸವನ್ನು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕೆಂದು ಸಲಹೆ ಮಾಡಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ರಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಇದರ ಬಳಕೆಗೆ ನಿರಂತರವಾಗಿ ಉತ್ತೇಜಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ಜಿ.ಪಂ. ಉಪಕಾರ್ಯದರ್ಶಿ ಎನ್. ಮುನಿರಾಜಪ್ಪ, ಯೋಜನಾ ಮುಖ್ಯಾಧಿಕಾರಿ ಮಾದೇಶು, ಯೋಜನಾ ನಿರ್ದೇಶಕರಾದ ಶ್ರೀಧರ್, ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಆರ್ ಸಿ ಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಚಿತ ಸಾಮೂಹಿಕ ಸರಳ ವಿವಾಹ : ನೋಂದಣಿಗೆ ಮನವಿ

      ಚಾಮರಾಜನಗರ, ಫೆ. 06- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊಳ್ಳೇಗಾಲ ತಾಲೂಕಿನ ಹನೂರು ಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಫೆಬ್ರವರಿ 18ರಂದು ಬೆಳಿಗ್ಗೆ 11 ಗಂಟೆಗೆ ಪ್ರಬುದ್ಧ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಚೇತವನ ಬೌದ್ಧ ವಿಹಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಉಚಿತ ಸರಳ ಸಾಮಾಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರು ಫೆಬ್ರವರಿ 13ರೊಳಗೆ ಪ್ರಬುದ್ಧ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಚೇತವನ ಬೌದ್ಧವಿಹಾರ, 14/96 ಚೆನ್ನಾಲಿಂಗನಹಳ್ಳಿ ಪೋಸ್ಟ್, ಕೊಳ್ಳೇಗಾಲ ತಾಲೂಕು ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಳ್ಳೇಗಾಲ ತಾಲೂಕು ಇಲ್ಲಿ ನೊಂದಾಯಿಸಿಕೊಳ್ಳಬಹುದು.
ವಧುವಿಗೆ ಕಡ್ಡಾಯವಾಗಿ 18 ವರ್ಷ, ವರನಿಗೆ 21 ವರ್ಷ ಪೂರ್ಣವಾಗಿರಬೇಕು. ಈ ಬಗ್ಗೆ ದಾಖಲಾತಿ ಸಲ್ಲಿಸಬೇಕು. ಸರಳ ಸಾಮಾಹಿಕ ವಿವಾಹದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಸಾವಿರ ರೂ. ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕೆಪಿಎಸ್‍ಸಿ ಪರೀಕ್ಷೆ

ಚಾಮರಾಜನಗರ, ಫೆ. 06 - ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಫೆಬ್ರವರಿ 4ರಂದು ನಡೆಸಲು ಉದ್ದೇಶಿಸಿದ್ದ ಪ್ರಥಮದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡಿದ್ದು ಈ ಪರೀಕ್ಷೆಯನ್ನು ಫೆಬ್ರವರಿ 25ರಂದು ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಹಿಂದೆ ನಿಗದಿಪಡಿಸಲಾಗಿದ್ದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ. ಉಳಿದಂತೆ ಫೆಬ್ರವರಿ 10ರಂದು ಪ್ರಥಮದರ್ಜೆ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಫೆಬ್ರವರಿ 11ರಂದು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.



ಫೆ. 17ರಂದು ಚಾಮರಾಜನಗರ ಜಿಲ್ಲಾಮಟ್ಟದ ಕ್ರೀಡಾಕೂಟ: ಹೆಸರು ನೊಂದಾಯಿಸಲು ಮನವಿ

ಚಾಮರಾಜನಗರ, ಫೆ. 06 - ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಾಪುರದ ಗೌತಮಬುದ್ಧ ಸಾಂಸ್ಕøತಿಕ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರವರಿ 17ರಂದು ಬೆಳಿಗ್ಗೆ 9.30 ಗÀಂಟೆಗೆ ಆಯೋಜಿಸಲಾಗಿದೆ.
ಸ್ಪರ್ಧಿಗಳಿಗೆ 100 ಮೀ, 200 ಮೀ. ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಖೋಖೋ ಹಾಗೂ ಕಬಡ್ಡಿ ಸ್ಪರ್ಧೆಗಳಿವೆ.
ಸ್ಪರ್ಧಾಳುಗಳು ಕ್ರೀಡಾಕೂಟದಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟದ ಸ್ಥಳದಲ್ಲಿ ಸಂಘಟಿಕರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಬಸವಣ್ಣ (ಮೊ. 9482708278), ಮಹೇಶ್ (ಮೊ. 9900430748), ಪ್ರಭಾವತಿ (ಮೊ. 8095040475), ಗೋವಿಂದರಾಜ್ (ಮೊ. 7353633360), ಮಂಜಪ್ಪ ಬಿ.ಎಂ. (ಮೊ. 9590632002), ರಾಜೇಶ್ ಎಂ (ಮೊ. 8660640330), ಬಿ.ವಿ. ಮಂಜುನಾಥ (ಮೊ. 9742567733) ಇವರುಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಮಗುವಿನ ಪೋಷಕರ ಪತ್ತೆಗೆ ಮನವಿ

ಚಾಮರಾಜನಗರ, ಫೆ. 06- ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದ ಸರಿತಾ ಹಾಗೂ ಸತ್ತಿವೇಲ್ ದಂಪತಿಗಳು 2017ರ ಮೇ 1ರಂದು ಕೊಯಮತ್ತೂರಿನ ವೈದ್ಯಕೀಯ ಆಸ್ಪತ್ರೆಯಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ನಂತರ ಪುಣಜನೂರು ಗ್ರಾಮಕ್ಕೆ ಬಂದು ಮುಸ್ಲಿಂ ದಂಪತಿಗಳಿಗೆ ಸಾಕಲು ನೀಡಿದ್ದರು. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಮುಸ್ಲಿಂ ದಂಪತಿಗಳಿಂದ ಮಗುವನ್ನು ಇಲಾಖೆಯ ವಶಕ್ಕೆ ಪಡೆದು ರಕ್ಷಿಸಲಾಗಿದೆ.
ಇಲಾಖೆಯ ವಶಕ್ಕೆ ಪಡೆದ ನಂತರ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗುವಂತೆ ಜೈವಿಕ ಪೋಷಕರಾದ ಸತ್ತಿವೆಲ್ ಹಾಗೂ ಸರಿತಾರಿಗೆ ತಿಳಿಸಿದರೂ ಸಹ ಇದುವರೆಗೆ ಮಗುವಿನ ಬಗ್ಗೆ ವಿಚಾರಿಸಲು, ವಾಪಸ್ಸು ಪಡೆಯಲು ಹಾಜರಾಗಿರುವುದಿಲ್ಲ. ಪುಣಜನೂರು ಗ್ರಾಮದಲ್ಲೂ ವಾಸವಿರುವುದಿಲ್ಲ.
ಮಗುವಿನ ತಂದೆಯಾದ ಸತ್ತಿವೇಲ್ ತಮಿಳುನಾಡಿನÀ ಸತ್ಯಮಂಗಲಂನ ಹಳ್ಳಿಯ ನಿವಾಸಿಯಾಗಿದ್ದು ಅಲ್ಲಿಗೆ ಹೋಗಿರುವುದಾಗಿ ಪುಣಜನೂರು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿರುತ್ತಾರೆ. ಮಗುವನ್ನು ಪ್ರಸ್ತುತ ಮಂಡ್ಯ ಜಿಲ್ಲೆಯ ದತ್ತು ಕೇಂದ್ರ ವಿಕಸನ ಸಂಸ್ಥೆಯಲ್ಲಿ ಪುನರ್ ವಸತಿಗೊಳಿಸಿ ಮಗುವಿಗೆ ವೈದೇಹಿ ಎಂದು ನಾಮಕರಣ ಮಾಡಲಾಗಿರುತ್ತದೆ.
ಮಗುವಿನ ಮೂಲ ಪೋಷಕರ ಪತ್ತೆಗಾಗಿ ಕೋರಲಾಗಿದ್ದು ಸಂಬಂಧಪಟ್ಟವರು ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಮಕ್ಕಳ ಕಲ್ಯಾಣ ಸಮಿತಿಯ ಬಾಲಕಿಯರ ಸರ್ಕಾರಿ ಬಾಲಮಂದಿರ (ದೂ.ಸಂ. 08226-225701, ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು (ದೂ.ಸಂ. 08226-222354) ಅಥವಾ ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ (ವಿಶೇಷ ದತ್ತು ಸಂಸ್ಥೆ) (ದೂ.ಸಂ. 08232-221717)ಯನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಬಯಲು ಶೌಚಮುಕ್ತ ನಗರ : ಆಕ್ಷೇಪಣೆ, ಪ್ರತಿಕ್ರಿಯೆ ಆಹ್ವಾನ 

ಚಾಮರಾಜನಗರ, ಫೆ. 06- ಕೊಳ್ಳೇಗಾಲ ನಗರಸಭೆಯು ನಗರಾಭಿವೃದ್ಧಿ ಮಂತ್ರಾಲಯದ ಸ್ವಚ್ಚ ಭಾರತ್ ಅಭಿಯಾನದಡಿ ಬಯಲು ಶೌಚ ಮುಕ್ತ ನಗರವನ್ನಾಗಿ ಮಾಡಲು ಉದ್ದೇಶಿಸಿ ಕೆಲವು ವಾರ್ಡುಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲು ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ನಗರಸಭೆಯ ವಾರ್ಡ್ ಸಂಖ್ಯೆ 8, 10, 14, 15, 16, 17, 18, 19, 20, 21, 22 ಮತ್ತು 23ರ ಒಟ್ಟು 12 ವಾರ್ಡುಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಲು ತೀರ್ಮಾನಿಸಿದೆ.
ಈ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರು ಫೆಬ್ರವರಿ 9ರ ಒಳಗೆ  ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳು ಇದ್ದಲ್ಲಿ ಕೊಳ್ಳೇಗಾಲ ನಗರಸಭೆಗೆ ಲಿಖಿತವಾಗಿ ಸಲ್ಲಿಸಲು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.


Monday, 5 February 2018

ನೀವು  ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರ ಹಾಗಿದ್ದರೆ ನಿಮ್ಮ ಹಣ ನಷ್ಟವಾಗಬಾರದೆಂದರೆ ಇದನ್ನು ಓದಲೇಬೇಕು. ಈ ಸೂಚನೆಗಳನ್ನುಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಖಾತೆಯಲ್ನೋಲಿ ಬಂಪರ್ ಬಹುಮಾನದ ಸೂಚನೆಯನ್ನು ಓದಿದ ಮೇಲೆ ನಿಮಗೆ ಒಂದು ಕ್ಷಣ ಅಚ್ಚರಿ ಆಗಬಹುದು. ಅಂತಹುದೇನು ಬಹುಮಾನದ ಸೂಚನೆ ನೀಡಿದೆ ಅಂತೀರಾ ಮುಂದೆ ನೋಡಿ.

ಕೆಲದಿನಗಳಿಂದ ಜನರು ಆಧಾರ್ ನಂಬರ್ ಅನ್ನು ಮೊಬೈಲ್ ನಂಬರ್-ಗೆ, ಬ್ಯಾಂಕ್ ಖಾತೆಗೆ, ಸಿಲಿಂಡರ್-ಗೆ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್-ಕಾರ್ಡ್ ಗೆ ಹೀಗೆ ಹಲವು ಸರ್ಕಾರದ ಗುರುತಿನ ಚೀಟಿಗಳಿಗೆ ಲಿಂಕ್ ಮಾಡುವುದು ಸರ್ಕಾರ ಕಡ್ಡಾಯ ಮಾಡಿತ್ತು, ಸರ್ಕಾರದ ನಿಯಮವನ್ನು ಬಂಡವಾಳವಾಗಿ ಇಟ್ಟುಕೊಂಡು ಖದೀಮರು, ಎಷ್ಟೋ ಗ್ರಾಹಕರಿಂದ ಅವರ ಆಧಾರ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ನಂಬರ್ ಪಡೆದು ಅಮಾಯಕ ಜನರ ಹಣ ಲಪಟಾಯಿಸಿತ್ತು ಈಗ ಇದಕ್ಕೆ ಇನ್ನೊಂದು ಸೇರ್ಪಡೆಯೇ ಐIಅ ಅಥವಾ ವಿಮೆ ಖಾತೆಗೆ ಆಧಾರ್ ನಂಬರ್ ಸೇರ್ಪಡೆ ಗೊಳಿಸುವುದು.



ಅರೆ ಇದರಲ್ಲೇನು ತಪ್ಪಿದೆ, ಇದರಿಂದ ಪಾಲಿಸಿದಾರರ ಹಣ ಸುರಕ್ಷಿತವಾಗಿರುತ್ತದೆ ಹಾಗು ನಕಲಿ ಖಾತೆಗೆ ಬ್ರೇಕ್ ಬೀಳುತ್ತದೆ ಅಂತೀರಾ, ಹೌದು, ನೀವು ಹೇಳುತ್ತಿರುವುದು ಸರಿಯಾಗಿದೆ, ಆದರೆ ಇದನ್ನು ಮಾಡಿರುವುದು ಐIಅ ಯವರಲ್ಲ, ಖದೀಮರು ಅಥವಾ ಹ್ಯಾಕರ್ಗಳು, ಇವರು ಐIಅ ಯವರ ಹೆಸರಿನಲ್ಲಿ ಅವರ ಲೋಗೋ ಬಳಸಿ ನಿಮ್ಮ ಮೊಬೈಲ್ ನಂಬರ್-ಗೆ ಸಂದೇಶವನ್ನು ಕಳಿಸಿ ಅದರಲ್ಲಿ ಇರುವ ನಂಬರಿಗೆ ನಿಮ್ಮ ಪಾಲಿಸಿ ನಂಬರ್, ಮೊಬೈಲ್ ನಂಬರ್ ಹಾಗು ಇತರೆ ವಿವರ ಕಳುಹಿಸಲು ತಿಳಿಸುತ್ತಾರೆ, ಒಂದು ವೇಳೆ ಅವರು ಹೇಳಿದ ಹಾಗೆ ಮಾಡಿದರೆ ನೀವು ಕಷ್ಟಪಟ್ಟು ದುಡಿದು, ನಿಮ್ಮ ಅಥವಾ ನಿಮ್ಮ ಮನೆಯವರ ಭವಿಷ್ಯಕ್ಕಾಗಿ ಎಂದು ಕೂಡಿಟ್ಟ ಹಣ ಮುಳುಗೋದಂತು ನಿಶ್ಚಿತ.

ಈ ಬಗ್ಗೆ ಭಾರತೀಯ ಜೀವ ವಿಮಾ ನಿಗಮ ಸೂಚನಾ ಫಲಕದ ಮೂಲಕ ತನ್ನ ಗ್ರಾಹಕರಿಗೆ ಸ್ಪಷ್ಟವಾಗಿ ಹೇಳಿದೆ. ಒಂದು ವೇಳೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆ ಬಂದರೆ ಅದು ನಮ್ಮ ಕಚೇರಿಗಳಲ್ಲಿ ಅಥವಾ ನಮ್ಮ ಅಫೀಷಿಯಲ್ ವೆಬ್-ಸೈಟ್ ನಲ್ಲಿ ಪ್ರಕಟಿಸುತ್ತೇವೆ ಎಂದು ಐIಅ ಯವರು ಹೇಳಿದ್ದಾರೆ.

ಒಟ್ಟಿನಲ್ಲಿ ನಿಮಗೆ ಇಂತಹ ಯಾವುದೇ ಸಂದೇಶ ಅಥವಾ ಕರೆ ಬಂದರೆ ಅದರ ಬಗ್ಗೆ ಒಂದು ಬಾರಿ ಯೋಚಿಸುವುದು ಒಳ್ಳೆಯದು…!

Friday, 20 October 2017

ಕಂಡವ್ರ ಹೆಂಡತಿಗೆ ಸಂದೇಶ ಕಳಿಸಿದಾಗ.!

ಕಂಡವ್ರ ಹೆಂಡತಿಗೆ ಸಂದೇಶ ಕಳಿಸಿದಾಗ.!


ಜಾಗತಿಕ ಮಟ್ಟದಲ್ಲಿ ಏನೇಲ್ಲಾ ಬೆಳೆಯುತ್ತಿದ್ದರು ಯುವಕರು ಯುವತಿಯರು ಮಾಯಾ ಜಾಲದಲ್ಲಿ ಸಿಲುಕುತ್ತಿದ್ದಾರೆ. ಮಾಯಾಜಾಲವೋ ಮೋಹ ಜಾಲವೋ ಗೊತ್ತಿಲ್ಲ,  ನಕಲಿ ಖಾತೆ ಮಾಡಿಕೊಂಡು ಫೇಸ್ ಬುಕ್, ವಾಟ್ಸಾಪ್ ನತ್ತ ಮುಖ ಮಾಡಿದ ಎಷ್ಟೋ ಜನರು ಯಾರ್ಯಾರಿಗೋ ಮೋಸ ಮಾಡುತ್ತಿದ್ದಾರೆ. ಮಾಡುತ್ತಲೂ ಇದ್ದಾರೆ.. ಇದೆಲ್ಲ ಗೊತ್ತಿರುವುದೇ ಎನ್ನಬೇಡಿ, ಗೊತ್ತಿಲ್ಲದವರಿಗೆ ಅವರ ಪಾಡೇನು ಎಂಬುದಷ್ಟೇ ಮನಸ್ಸು ಪರಿಕ್ಷೀಸಬೇಕಿದೆ..
ಯಾಕೋ ಏನೋ ಸಣ್ಣ ಚಿತ್ರಣ ಮನಸ್ಸು , ಕಣ್ಣ ಮುಂದೆ ಬಂದಿತು. ಆ ಚಿತ್ರಣಕ್ಕೆ ಸಾಮಾಜಿಕ ಜಾಲತಾಣ ಕಾರಣವಾಗಿತ್ತು. ಅದಕ್ಕೆ ಫೇಸ್ ಬುಕ್ ಕಾರಣವಾಗಿತ್ತು. ಅದಕ್ಕೆ ಒಬ್ಬರು ಕಾರಣ ಆಗೋದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಎರಡು ಕೈ ಸೇರಿದರೆ ಚಪ್ಪಾಳೆ ಎಂಬುದು ಸಂಬಂದ ಪಟ್ಟವರು ಅರಿಯಲಾರರು.
ಅದೊಂದು ದಿನ ಮಳೆ ಬರುತ್ತಿತ್ತು. ಇದ್ದಕ್ಕಿಂದಂತೆಯೇ ಎಲ್ಲಿಂದಲೋ ಬಂದ ಇಬ್ಬರು ಯುವಕರು ಬಂದು ಒಬ್ಬನಿಗೆ ಮನಸ್ವೇಚ್ಚೆಯಂತೆ ಬೈಯ್ದುಕೊಂಡು, ಹೊಡೆಯುತ್ತಿದ್ದ ಅಲ್ಲಿ ನೆರೆದಿದ್ದವರು ಮೌನವಾಗಿದ್ದರು. ಕಾರಣ ಅಲ್ಲಿ ಒಬ್ಬ ಮಹಿಳೆಯ ವಿಚಾರವನ್ನು ಎಳೆ ತಂದು ಪ್ರಾರಂಬಿಸಿದ್ದೆ ಈ ಮೌನಕ್ಕೆ ಕಾರಣವಾಗಿತ್ತು.
ಗಲಾಟೆಯೂ ಆಯಿತು, ಮಳೆಯೂ ನಿಂತೂ ಆಯ್ತು ಮುಂದೆ ಗೊತ್ತೆ ಇದೆಯಲ್ಲ...ಪೋಲೀಸ್ ಠಾಣೆ, ವಿಚಾರಣೆ ದೂರು ದಾಖಲು, ನ್ಯಾಯಾಲಯ ಎಲ್ಲವೂ ಪ್ರಜ್ಞಾವಂತ ನಾಗರೀಕರಿಗೆ ಗೊತ್ತಿರುತ್ತದೆ. ಅವಿದ್ಯಾವಂತರಿಗೆ ಏನು ಇದರ ಬಗ್ಗೆ ತಿಳಿದಿರುವುದಿಲ್ಲ ಎಂದರೆ ತಪ್ಪಾಗಲಾರದು.
ನೀವು ಭಾವಿಸಿದಂತೆ ಠಾಣೆಗೆ ದೂರು ಹೋದ ಹಿನ್ನಲೆಯಲ್ಲಿ ಹೇಗೋ ವಿಚಾರಣೆ ಮಾಡಬೇಕಲ್ಲ. ಪ್ರಾರಂಭವಾಯಿತು ವಿಚಾರಣೆ. ದೂರುದಾರ ದೂರು ಕೊಡೋದು ಬಿಟ್ಟು ನನ್ನ ಹೆಂಡತಿಗೆ ನೋವಾಗುವಂತೆ ಸಂದೇಶ ಕಳಿಸಿದ್ದಾನೆ ಅದಕ್ಕೆ ಹೊಡೆದೆ ಎಂದನೋ ಹೊರತು ದೂರು ಕೊಡಲು ಮುಂದಾಗದೇ ಮೂರ್ನಾಲ್ಕು ಗಂಟೆ ಕಾಲ ತಡೆದು ದೂರು ಕೊಟ್ಟ. ಅಲ್ಲಿಗೆ ಅವನ ಕಥೆ ಮುಗಿಯಿತು.
ಹೆಂಡತಿಗೆ ಸಂದೇಶ ಕಳಸಿದವನ ವಿಚಾರಣೆ ಪ್ರಾರಂಭವಾದಾಗ ವಿಚಾರಣೆ ಮಾಡುವ ಪೋಲಿಸರನ್ನೆ ಪ್ರಶ್ನೆ ಕೇಳಲಾರಂಬಿಸಿದ.. ಯಾಕೆಂದ್ರೆ ತಪ್ಪು ಮಾಡಿರದ ಆ ಮುಖದ ಭಾವನೆ.ಎಲ್ಲವನ್ನೂ ಸಹಿಸಿಕೊಂಡು ಕಾನೂನು ಹೋರಾಟ ಮಾಡುವ ಮನಸ್ಸು , ದಿಟ್ಟ ಹೆಜ್ಜೆ ಎಲ್ಲದಕ್ಕೂ ಕಾರಣವಾಗಿತ್ತು. ಇದಕ್ಕೆ ವಿಚಾರಣೆ ಮಾಡುವ ಪೊಲೀಸರ ಮೌನವೂ ಒಂದಾಗಿತ್ತು.
ವಾಟ್ಸಾಫ್ ಗುಂಪು ನಿಮಗೆ ಗೊತ್ತೆ ಇದೆ.. ಅಲ್ಲಿ ಹಲವಾರು ಸದಸ್ಯರಿರುತ್ತಾರೆ. ಅದಕ್ಕೊಬ್ಬರು ಅಡ್ಮಿನ್ ಹೀಗೆ.. ಕೆಲವೆಡೆ ಎಲ್ಲರೂ ಅಡ್ಮಿನ್ ಹೀಗೆ ಗುಂಪುಗಳು ಇರುತ್ತದೆ. ಆದರೆ ಇಲ್ಲಿನ ವಾಟ್ಸಾಪ್ ಗುಂಪಿಗೆ ಪೋಲೀಸ್ ಇನ್ಸ್‍ಪೆಕ್ಟರ್ ಅವರೇ ಅಡ್ಮಿನ್ .. ಈಗ ಹೇಳಿ.. ತಪ್ಪು ಯಾರದ್ದು ಅಂತ.. ಗುಂಪಿಗೆ ಸಂದೇಶ ಕಳಿಸಿದ್ದವನದ,? ಗುಂಪಿಗೆ ಸೇರಿಸಿಕೊಂಡವರದ್ದಾ.? ಅಂತ.
ತಪ್ಪು ಯಾರ ಕಡೆಯಿಂದ ಆಗಿಲ್ಲ ಎಂಬುದು ಪೋಲೀಸ್ ಇನ್ಸ್‍ಪೆಕ್ಟರ್ ಗೆ ಗೊತ್ತಿತ್ತು.  ತಪ್ಪು ಆಗಿದ್ದೆ ಆಗಿದ್ದರೆ ಹೊಡೆದಾಟ ನಡೆಸಿದವನ ಹೆಂಡತಿ ನಂಬರ್ ಹೇಗೆ ಅವರ ಗುಂಪಿಗೆ ಹಾಕಿದರು  ಅಂದರೆ ಸೇರಿಸಿಕೊಂಡರೋ ಎಂಬ ಪ್ರಶ್ನೆ ವಿಚಾರಣೆ ಸಮಯದಲ್ಲಿ ಕೇಳುತ್ತಿದ್ದಾಗಲೇ ಅವನು ತಪ್ಪಿತಸ್ಥನಲ್ಲ ಎಂದು ನೇರವಾಗಿ ಗೊತ್ತಿದ್ದು..
ಗುಂಪಿನಲ್ಲಿ ಹೊಡೆದಾಡಿವನ ಹೆಂಡತಿ ಒಬ್ಬನಿಗಷ್ಟೇ ಇರಲಿಲ್ಲ, ವಾಟ್ಸಾಪ್ ಗುಂಪಿನ ಇತರ ಬಹುತೇಕ ಸದಸ್ಯರಿಗೂ ಇದ್ದರೂ ಅವರು ಮಾತ್ರ ಚಕಾರವೆತ್ತಲಿಲ್ಲ. ಕಾರಣ ಅದ್ಯಾವುದು ಅವರಿಗೆ ಸಂಬಂದಿಸಿರಲೇ ಇಲ್ಲ. ಉಳಿದವರಿಗೆ ಹೊಡೆದಾಟವೆ ಸಂತಸ ನೀಡಿತ್ತು. ಅಂತೂ ಕೊನೆಗೂ ಎದುರುದಾರ ದೂರು ಕೊಟ್ಟರೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಬದ್ದರಾಗಿದ್ದರು.
ದೂರು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಬದ್ದರಾಗಿದ್ದರೂ ವಾಟ್ಸಾಪ್ ಕಾಯ್ದೆಯಡಿ ಅವರೂ ಸಾಕ್ಷಿದಾರರನ್ನಾಗಿ ನ್ಯಾಯಾಲಯ ಪರಿಗಣಿಸುತ್ತಿತ್ತು, ಅಷ್ಟೇ ಅಲ್ಲ ಹೊಡೆದವನ ಹೆಂಡತಿಯೂ ನ್ಯಾಯಾಲಯಕ್ಕೆ ಬರಬೇಕಾಗಿತ್ತು. ಇದೆಲ್ಲವನ್ನ ಅರಿತಿದ್ದ ಹಿರಿಯರು ಗಲಾಟೆಗೆ ಪರೋಕ್ಷ ಹಿನ್ನಲೆ ತಿಳಿದು ತಟಸ್ಥರಾಗಿ ಇರುವಂತೆ ಸೂಚಿಸಿ ಸಲಹೆ ನೀಡಿದರು. ಅದರಂತೆ ಹೊಡೆಸಿಕೊಂಡವನು ಸುಮ್ಮನಾದರು.
ದಿನಗಳು ಉರುಳುತ್ತಾ ಹೋದಂತೆ ಗಲಾಟೆ ಪೂರಕ ಮಾಹಿತಿಯನ್ನ ಸ್ನೇಹಿತರರು ಸೇರಿದಂತೆ ಇತರರು ಕೇಳಲಾರಂಬಿಸಿದರು. ಅದಕ್ಕೆ ಅವನ ಉತ್ತರ ಒಂದೇ…. ಮೆಸೆಜ್ ಬಂದಿದೆ ಎಂದು ಹೊಡೆದವನು ಹಾಗೂ ಅವನ ಹೆಂಡತಿಯನ್ನೆ ಕೇಳಿಕೊಳ್ಳಿ ಎಂದು.. ಆಗಲೇ ಬಹುತೇಕರಿಗೆ ಹೇಳಲಾರಂಬಿಸಿದ.. ಯಾಕೆ ಈ ತರಹ ಹೇಳಿದ ಎಂಧರೆ ಮತ್ತೆ ಅವರೊಂದಿನ ಕಿಡಿಗೇಡಿ ಸನೇಹಿತರುಗಳೆ ಮತ್ತೆ ದ್ವೇಷ ಬೀಜ ಬಿತ್ತಿ ಗಲಾಟೆ ನೋಡುವ ಹಂಬಲ ಇರುವಂತಿತ್ತು.


ಪೊಲೀಸ್ ಅದಿಕಾರಿಯೋರ್ವ ಅಡ್ಮಿನ್ ಅಲ್ಲಿ ಮಾಡಡ ತಪ್ಪಿಗೆ ಗಲಾಟೆ, ಠಾಣೆಗೆ ಹೋದರೆ ಪ್ರಕರಣಗಳು ನೈಜವಾಗಿ ನಡೆಯುತ್ತಿರುವ ಘಟನೆಗಳು ನೆನೆದರೆ ಭಯವಾಗುತ್ತದೆ.